Chief Editor
Manohar. R (Manu)
Photo Journalist
chitrataramanu@gmail.com
+91 9845549026
ಡಬ್ಬಿಂಗ್ ಮುಗಿಸಿದ ಹ್ಯಾಪೀ ಬರ್ತ್‌ಡೇ
Posted date: 25 Thu, Feb 2016 – 04:48:26 PM

ಖ್ಯಾತ ನಿರ್ದೇಶಕ ಕೆ. ಮಹೇಶ್ ಸುಖಧರೆಯವರ ಬಹು ನಿರೀಕ್ಷಿತ ಚಿತ್ರ ಹ್ಯಾಪಿ ಬರ್ತ್‌ಡೇ ಅದ್ದೂರಿ ಚಿತ್ರದ ಮಾತಿನ ಮರುಲೇಪನ ಕಾರ್ಯವು ಇತ್ತೀಚೆಗೆ ಬಾಲಾಜಿ ಸ್ಟುಡಿಯೋವಿನಲ್ಲಿ ಮುಕ್ತಾಯಗೊಂಡಿತು.
ತಾರಾಗಣದಲ್ಲಿ ನಾಯಕನಾಗಿ ಸಚಿನ್ (ಹೊಸ ಪರಿಚಯ), ನಾಯಕಿಯಾಗಿ ಸಂಸ್ಕೃತಿ ಶೆಣೈ ಕಾಣಿಸಿಕೊಳ್ಳಲಿದ್ದು, ಪ್ರಮುಖ ಪಾತ್ರಗಳಲ್ಲಿ ಅಚ್ಯುತಕುಮಾರ್, ರವಿಕಾಳೆ, ನೀನಾಸಂ ಅಶ್ವಥ್, ಪ್ರಶಾಂತ್ ಸಿದ್ಧಿ, ರಾಜೇಶ್ ನಟರಂಗ, ಅರುಣ ಬಾಲರಾಜ್, ಅಶ್ವಿನಿ, ಸಾಧುಕೋಕಿಲ, ಚಿಕ್ಕಣ್ಣ, ಬುಲೆಟ್ ಪ್ರಕಾಶ್, ದತ್ತಾತ್ರೇಯ ಮುಂತಾದವರಿದ್ದಾರೆ.     
ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣಕ್ಕೆ ಚಿತ್ರತಂಡ ತಯಾರಿ ನಡೆಸಿದ್ದು, ಸುಮಾರು ೧೦,೦೦೦ ಜನರ ನಡುವೆ ಒಂದು ಸಾಹಸೀ ಜನಪದ ಕಲೆಯ ಸ್ಪರ್ಧೆ ಈ ಚಿತ್ರದ ಹೈಲೈಟ್.  ಯಶಸ್ವೀ ಸಂಭ್ರಮ, ಸೈನಿಕ ಚಿತ್ರಗಳ ನಂತರ ನಿರ್ದೇಶಕ ಕೆ. ಮಹೇಶ್ ಸುಖಧರೆಯವರ ಅತ್ಯುತ್ತಮ ಗ್ರಾಮೀಣ ಸೊಗಡಿನ ಚಿತ್ರ ಇದು ಎಂದು ಹೇಳಲಾಗುತ್ತಿದೆ.
ಚಿತ್ರಕ್ಕೆ ನಾಗಮಂಗಲ ಕೃಷ್ಣಮೂರ್ತಿ ಸಂಭಾಷಣೆ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಸುರೇಶ್ ಜಯಕೃಷ್ಣ ಛಾಯಾಗ್ರಹಣ, ರವಿವರ್ಮ, ಥ್ರ್ರಿಲ್ಲರ್ ಮಂಜು, ಜಾಲಿ ಸಬಾಸ್ಟಿನ್ ಸಾಹಸ, ಹರಿಕೃಷ್ಣ ಸಂಗೀತವಿದ್ದು ಈ ಚಿತ್ರವನ್ನು ಮಹೇಶ್ ಸುಖಧರೆ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಡಬ್ಬಿಂಗ್ ಮುಗಿಸಿದ ಹ್ಯಾಪೀ ಬರ್ತ್‌ಡೇ - Chitratara.com
Copyright 2009 chitratara.com Reproduction is forbidden unless authorized. All rights reserved.